Friday, May 29, 2009

ಕಾರಣ!!

ಹೀಗೊ೦ದು ಕವನವ ಬರೆದಿರುವೆ ನಾನಿ೦ದು
ಕಾರಣವ ಕೇಳದಿರಿ ಏಕಿದು ಹೀಗೆ೦ದು!

ತಪ್ಪು ಮಾಡಿದರೆ ಕಾರಣವ ಕೊಡುತಿಹೆ ನೀನು
ಒಪ್ಪು ಮಾಡಿದರು ಕಾರಣವ ಹುಡುಕುವೆ ನೀನು
ಏನು ಮಾಡಿದರು ಕಾರಣವೆ ಇಹುದಲ್ಲದೇ
ಮಾಡದಿದ್ದರು ಕಾರಣವೆ, ಕಾರಣವಲ್ಲವೇ?

ಬಲ್ಲೆಯಾ ಹಗಲಿರುಳುಗಳಾಗುವ ಕಾರಣವ?
ಬಲ್ಲೆಯಾ ಮಾಸ ಋತುಗಳಾಗುವ ಕಾರಣವ?
ಬಲ್ಲೆಯಾ ಭುಮಿಜೆ ಸುತ್ತುವ ಕಾರಣವ?
ಬಲ್ಲೆಯಾ ಸೌರವ್ಯೂಹವಿರುವ ಕಾರಣವ ?

ನಿನ್ನ
ವಿಜ್ಞಾನ ಒ೦ದೇ ಕಾರಣಗಳ ನೀಡಬಲ್ಲುದೇ
ಎಷ್ಟು ವಿಜ್ಞಾನ
ಗಳಿಹುದೆ೦ದು ನಿನ್ನರಿವಿಗಿದೆಯೇ?
ಏನು ಕೊಡುವುದೋ ನೀನೊಪ್ಪುವ ಕಾರಣವ ನಾಕಾಣೆ,
ಏಕೆ ಒಪ್ಪುವೆ ತಿಳಿಯೆ ಯಾವುದೋ ಕಾರಣಕೆ..

ಎಲ್ಲಕೂ ಕಾರಣವಿಹುದೆ೦ದು ಹೇಳುವೆಯೋ..
ಕಾರಣದ ಬೆನ್ನೇರಿ ನೀನೆಲ್ಲಿ ಹೋಗುವೆಯೋ?
ನಾವಿರುವ ಕಾರಣವ ನೀನೆ೦ತು ಬಲ್ಲೆಯೋ?
ನೀನಾರೆ೦ಬುದನು ತಿಳಿಯದೇ ಹೋದೆಯೋ
...

ದೇವನಿರುವವನೆ೦ದು ಕೊಡುವೆ ನೀ ಕಾರಣವ
ಇಲ್ಲವೆ೦ದೂ ವಾದಿಸುವೆ, ಆಧಾರ - ಕಾರಣವ
ಜನ್ಮ-ಜನ್ಮಾ೦ತರದಿ ಹುಡುಕುತಿರೆ ನೀ ಕಾರಣವ..
ಏನು ತೀರಿಸುವುದೋ ನಿನ್ನೀ ಕಾರಣದ ದಾಹವ !!

--ಅಭಿ

8 comments:

  1. ಹೀಗೊ೦ದು ಕವನವ ಬರೆದಿರುವೆ ನಾನಿ೦ದು
    ಕಾರಣವ ಕೇಳದಿರಿ ಏಕಿದು ಹೀಗೆ೦ದು!..
    ನಾವು ಕೇಳೊಲ್ಲ....ಕಾರಣ. ಆದರೆ ಕವನ ಚೆನ್ನಾಗಿದೆ ಸರ್.
    -ಧರಿತ್ರಿ

    ReplyDelete
  2. ಚನ್ನಾಗಿ ಇದೆ ! :D
    ನಿಮ್ಮ PM ನ ಟಾರ್ಗೆಟ್ ಮಾಡಿದ್ಯ ಅನ್ಸ್ತು :P

    ReplyDelete
  3. ಕಾರಣ .. ಇದರ ಬಗ್ಗೆ ಸ್ವಲ್ಪ ಹೊತ್ತು ಯೋಚನೆ ಮಾಡ್ದೆ.. ಎಲ್ಲೋ ಕಳೆದ್ ಹೋದಾಗ್ ಆಯ್ತು! ಅಷ್ಟು ವಿಷಾಲವಾಗಿರೊ ಅ೦ಶವನ್ನು ಕವನವೊ೦ದರಲ್ಲಿ ತು೦ಬಿಟ್ಟ ನಿನ್ನ ಆಲೋಚನಾ ಲಹರಿಯು ವಿವೇಚನೀಯವಾದದ್ದೆ :)

    ReplyDelete
  4. @deepu - ಹ ಹ ! ನಿಮ್ PM ಹೀಗೆ ನಾ?
    @dharitri - ಧನ್ಯವಾದ :)
    @priya - ಎನೋ ತೋಚಿದ್ ಬರ್ದಿದೀನಿ ಅಷ್ಟೆ..

    ReplyDelete
  5. ಏನು ಕೊಡುವುದೋ ನೀನೊಪ್ಪುವ ಕಾರಣವ ನಾಕಾಣೆ,
    ಏಕೆ ಒಪ್ಪುವೆ ತಿಳಿಯೆ ಯಾವುದೋ ಕಾರಣಕೆ...
    sooper these lines are...
    karana hudukalu ondu karana irabahudu..

    ReplyDelete