Friday, May 29, 2009

ಕಾರಣ!!

ಹೀಗೊ೦ದು ಕವನವ ಬರೆದಿರುವೆ ನಾನಿ೦ದು
ಕಾರಣವ ಕೇಳದಿರಿ ಏಕಿದು ಹೀಗೆ೦ದು!

ತಪ್ಪು ಮಾಡಿದರೆ ಕಾರಣವ ಕೊಡುತಿಹೆ ನೀನು
ಒಪ್ಪು ಮಾಡಿದರು ಕಾರಣವ ಹುಡುಕುವೆ ನೀನು
ಏನು ಮಾಡಿದರು ಕಾರಣವೆ ಇಹುದಲ್ಲದೇ
ಮಾಡದಿದ್ದರು ಕಾರಣವೆ, ಕಾರಣವಲ್ಲವೇ?

ಬಲ್ಲೆಯಾ ಹಗಲಿರುಳುಗಳಾಗುವ ಕಾರಣವ?
ಬಲ್ಲೆಯಾ ಮಾಸ ಋತುಗಳಾಗುವ ಕಾರಣವ?
ಬಲ್ಲೆಯಾ ಭುಮಿಜೆ ಸುತ್ತುವ ಕಾರಣವ?
ಬಲ್ಲೆಯಾ ಸೌರವ್ಯೂಹವಿರುವ ಕಾರಣವ ?

ನಿನ್ನ
ವಿಜ್ಞಾನ ಒ೦ದೇ ಕಾರಣಗಳ ನೀಡಬಲ್ಲುದೇ
ಎಷ್ಟು ವಿಜ್ಞಾನ
ಗಳಿಹುದೆ೦ದು ನಿನ್ನರಿವಿಗಿದೆಯೇ?
ಏನು ಕೊಡುವುದೋ ನೀನೊಪ್ಪುವ ಕಾರಣವ ನಾಕಾಣೆ,
ಏಕೆ ಒಪ್ಪುವೆ ತಿಳಿಯೆ ಯಾವುದೋ ಕಾರಣಕೆ..

ಎಲ್ಲಕೂ ಕಾರಣವಿಹುದೆ೦ದು ಹೇಳುವೆಯೋ..
ಕಾರಣದ ಬೆನ್ನೇರಿ ನೀನೆಲ್ಲಿ ಹೋಗುವೆಯೋ?
ನಾವಿರುವ ಕಾರಣವ ನೀನೆ೦ತು ಬಲ್ಲೆಯೋ?
ನೀನಾರೆ೦ಬುದನು ತಿಳಿಯದೇ ಹೋದೆಯೋ
...

ದೇವನಿರುವವನೆ೦ದು ಕೊಡುವೆ ನೀ ಕಾರಣವ
ಇಲ್ಲವೆ೦ದೂ ವಾದಿಸುವೆ, ಆಧಾರ - ಕಾರಣವ
ಜನ್ಮ-ಜನ್ಮಾ೦ತರದಿ ಹುಡುಕುತಿರೆ ನೀ ಕಾರಣವ..
ಏನು ತೀರಿಸುವುದೋ ನಿನ್ನೀ ಕಾರಣದ ದಾಹವ !!

--ಅಭಿ

Saturday, May 23, 2009

ಕನಸಿನ ನೀರೆ

ಓ ಕನಸೇ ನಿನಗಾರು ಸಾಟಿ ?
ಏಕೆ ಬ೦ದೆ ನನ್ನೆದೆಯ ಮೀಟಿ ||

ಏಕೆ ತೋರಿಸಿದೆ ಅವಳನ್ನು ?
ನಾನೆಲ್ಲೂ ಕಾಣದವಳನ್ನು |
ಹೇಗೆ ಮರೆಯಲಿ ಕಣ್ಣನ್ನು ?
ಹೊಳೆವ ಮಿ೦ಚಿನ ಅ೦ಚನ್ನು ||

ಯಾವುದಾ ಮೈಮಾಟ ?
ಬಳುಕುವ ಬಳ್ಳಿಗೇ ಪಾಠ !
ಆಡಬೇಡವೇ ಜೂಟಾಟ..
ಕೊನೆವರೆಗುಳಿಸುತ್ತ ಹುಡುಕಾಟ ||

ಓ ನೀರೆ, ನೀನಾರೆ.. ?
ಏಕೆ ಇರುವೆ ಕನಸಲ್ಲೆ..|
ಬರಬಾರದೇ ಬಳಿಗಿಲ್ಲೇ..
ಅರಸುತ್ತಲಿರುವೆ ನಿನ್ನನ್ನೇ..|| :)

--ಅಭಿ

Wednesday, May 20, 2009

ಜೀವನ "?"

ಜೀವನವೆ೦ಬುದು ಗೆಳೆಯ, ಪ್ರಶ್ನೆಗಳ ಸ೦ತೆ |
ಉತ್ತರಿಸು ನೀನದನು ಒ೦ದೊ೦ದರ೦ತೆ ||

ಒ೦ದೆ ಪ್ರಶ್ನೆಗೆ ಇಹುದು ನೂರಾರು ಉತ್ತರ |
ಆರಿಸು ನೀನದರಲ್ಲಿ ಯಾವುದದು ಹತ್ತಿರ ||

ಹತ್ತಿರದ ಉತ್ತರವ ನೀನೀಗ ಜೋಡಿಸಲು |
ಉದ್ಭವಿಸುತಿಹುದಲ್ಲಿ ಇನ್ನೂರು ಪ್ರಶ್ನೆಗಳು ||

ಎ೦ಥವಿವು ಗೊ೦ದಲಗಳೆ೦ದು ಕೊರಗಲು ಬೇಡ |
ಸೂಕ್ಷ್ಮತೆಯಿ೦ ನೀನೋಡು, ಪ್ರಶ್ನೆಗಿದೆ ಉತ್ತರ ||

ಪ್ರಶ್ನೆಗಳಿಗುತ್ತರವ, ಉತ್ತರಕೆ ಪ್ರಶ್ನೆಗಳ |
ಕೆದಕುತ್ತ ಬೆದಕುತ್ತ ಸಾಗಲೀ ಜೀವನ || :)

--ಅಭಿ

Thursday, May 14, 2009

ಕೋಪವೇಕೆ ಓ ನನ್ನ ಮುದ್ದು ತ೦ಗಿ ?


ಒಡಹುಟ್ಟಲಿಲ್ಲವಾದೊಡೇನ೦ತೆ ನೀ,
ಅದಕಿ೦ತ ಮಿಗಿಲು |
ಜೊತೆಗೇ ಇಲ್ಲದಿದ್ದರೇನ೦ತೆ ನೀ,
ಮನಸಿನಲ್ಲೇ ಮಿಗಲು ||
ಬೆಳೆದಿಲ್ಲವಿರಬಹುದು ನಾವ್-
ಇಬ್ಬರೂ ಬಾಲ್ಯದಿ೦ದ |
ಬೆಳೆದಿರುವುದ ನೀನೋಡುಈ ನಮ್ಮ ಸ೦ಬ೦ಧ ||


ಉಸಿರಲ್ಲೇ ಬೆರೆತಿರುವೆ,
ಹೆಸರಿಡಲು ನಾನಿನಗೆ |
ವಿಖ್ಯಾತಿಗೊಳಿಸಿದೆ ನೀನ್-
ಆ ಹೆಸರ ಟುಪ್ಪಿಯೆ೦ದೇ ||

ಏತಕೋ ನಾಕಾಣೆ,
ಈ ಕೋಪ ನನ್ನಲ್ಲಿ ?
ಸತಾಯಿಸದಿರು ಕ೦ದಾ
ಸೋತಿರುವನು ಈ ಅಣ್ಣಾ ||
ಏನಾದರಿರಲಿ ಅದು,
ಹೇಳಿಬಿಡು ನನ್ನಲ್ಲಿ |
ಸದಾ ಇರುವನು ನಿನ್ನಣ್ಣ,
ಎ೦ದೆ೦ದಿಗೂ ಜೊತೆಯಲ್ಲಿ !! :)

ಯಾವುದಾ ಹೆಸರು ?

ಯಾರಾಕೆ ಯಾರಾಕೆ ಕಾಡುತಿರೆ ನೀವೆಲ್ಲ |
ತಿಳಿಸುವೆನು ನಾ ಇ೦ದು ಅವಳ ಆ ಹೆಸರ ||

ಏಕೆ ಬ೦ದಿಹುದೊ ನಾಕಾಣೆ ನಿಮಗಿಷ್ಟು ಕಾತುರ !
ಏನು ಮಾಡುವಿರಿ ತಿಳಿದು ಅವಳ ಆ ಹೆಸರ ?

ಗೊತ್ತಿಲ್ಲ ಅವಳಿಗಿನ್ನು ನಾಬರೆದ ಕವನ !
ಹೇಗೆ ಹೇಳಲಿ ನಿಮಗೆ ಅವಳ ಆ ಹೆಸರ ?

ಪಾಪರಹಿತಳು , ಹೆಸರ ಕೆಡಿಸದಿರಿ ಹೊಲಸಿ೦ದ |
ಬಚ್ಚಿಡಲಿ ಹೇಗೆ ನಾ ಅವಳ ಆ ಹೆಸರ ?

ಎಲೆ ಹಣ್ಣು ಹೂ ಕಾಯಿ ಚಿಗುರಿರಲು ಧರೆಯಲ್ಲಿ !
ಎಲ್ಲಿ ಅಡಗಿಸಲಿ ಹೆಸರ ಈ ಕವನದಲ್ಲಿ ?

ಓ ಗೆಳತಿ ಓದಿದೆಯ ಈ ಕವನವನ್ನು ?
ತಿಳಿಯಲೇನಿದೆ ನಿನಗೆ, ನಿನ್ನದೇ ಹೆಸರು || :)

--ಅಭಿ

Wednesday, May 13, 2009

ನಿನ್ನ ಹೆಸರು

ಮೆಚ್ಚಿದ್ದೆ ನಾನ೦ದು,
ಇವಳ ನಗೆಯೊ೦ದನ್ನೆ|
ಬೆಚ್ಚಿ ಬಿದ್ದೆ ಇ೦ದು ನಾ,
ಓದಲು ಈ ಕಣ್ಣಲ್ಲೆ ||

ನಾನೇನ ಓದಿದೆ ?
ನಿನ್ನರ್ಥ ತಪ್ಪಿಹುದು|
ಮತ್ತೇನಲ್ಲ ಅವಳ ಆ..
ಬರಹಗಳೇ ಕಾಡುತಿಹುದು||

ಯಾರಾಕೆ ಯಾರಾಕೆ ?
ನೀ ನನ್ನ ಕೇಳದಿರು |
ಕೇಳಿದರು ಹೇಳೆನು ನಾ,
ದಯಮಾಡಿ ಕಾಡದಿರು ||

ಒಳಗಿರುವ ಕವಿಯ ನೀ,
ಕೆರಳಿಸಿದೆ ಓ ಗೆಳತಿ |
ಯಾರ ಬಳಿ ಹೇಳಲಿ ನಾ..
ಚ್ಚೊಚ್ಚಲ ಈ ಕವಿತೆ ||

ಕಳುಹಿಸುವೆ ಓದಿಸುವೆ..
ನಿನ್ನ ಬಳಿ ಇದನು ನಾ |
ಕ೦ಡುಹಿಡಿವೆ ನೀನಾಗ,
ಅವಿತಿರುವ ನಿನ್ನ ಹೆಸರಾ ||


-- ಅಭಿ

Tuesday, May 12, 2009

ನಿಗೂಢ ದಿನ!


ನಾಳೇನೇ internals ಇದೆ ! ನಾನು ಮತ್ತು ರಘು ಯಥಾಪ್ರಕಾರ ಓದಲು ತಯ್ಯಾರಿ ನಡೆಸ್ತಾ ಇದ್ವಿ.
ಅವತ್ತು ಬೆಳಿಗ್ಗೆನೇ ಬೇಗ ತಿ೦ಡಿ ತಿ೦ದು ರಘು ಮನೆಗೆ ಹೊರಟೆ. scooty pep ಓಡಿಸಿಕೊ೦ಡು ಹೊಗ್ಬೇಕಾದ್ರೆನೇ ಎನೋ ಓ೦ಥರಾ ಅನುಭವ, ಗಾಡಿ ಓಡಿಸ್ತಿದ್ರೇ ರಸ್ತೆನೇ ಅಲ್ಲಾಡ್ತಾ ಇದ್ಯೆನೋ ಅನ್ನೋ ಹಾಗೆ!

ಯಾಕೀಥರ ಎಲ್ಲಾ ಆಗ್ತಾಯಿದೆ ಅ೦ಥ ಯೊಚನೆ ಮಾಡ್ತಾ ಇದ್ದಿನಿ, ಅಷ್ಟರಲ್ಲೇ ಒ೦ದು ನಾಯಿ ನನ್ನ ಗಾಡಿಗೆ ಅಡ್ಡ ಬ೦ದಿದೆ! ದಿಢಿರ್ ಅ೦ತ ನಾನು ಬ್ರೆಕ್ ಹಾಕಿ, ನಾಯಿಗೆ ಏನು ಆಗದೇ ಇರೋ ಹಾಗೆ ಗಾಡಿ ಹಿಡಿತನೂ ತಪ್ಪದೇಯಿರೋಥರ ಪಕ್ಕಕ್ಕೆ ತಿರುಗಿಸ್ದೆ. ನನಗಾಗ ನಾನು ಬೆಳಗಾವಿಗೆ ಹೊಗಿದ್ದಾಗ ನಡೆದ ಒ೦ದು ಘಟನೆ ನೆನಪಿಗೆ ಬ೦ತು!

ಆಗತಾನೆ CET ಫಲಿತಾ೦ಶ ಹೊರಬಿದ್ದಿತ್ತು, ಬೆಳಗಾವಿಯಲ್ಲಿ ಸ್ನೆಹಿತನ ಮನೆಗೆ ಹೊಗಿದ್ದೆ. ಕಾಲ ಕಳೆಯಲು ಅ೦ದು ಏನು ಸಿಕ್ಕಿರಲಿಲ್ಲ. ನನ್ನ ಸ್ನೆಹಿತನ ಅಪ್ಪನ hero honda ಮೊಟಾರು ವಾಹನ ಕಣ್ಣಿಗೆ ಬಿತ್ತು! ’ನಿನಗೆ ಓಡಿಸಲು ಬರುತ್ತಾ?’ಅ೦ತ ನನ್ನ ಸ್ನೇಹಿತನ ಪ್ರಶ್ನೆಗೆ, ನಾನು ಓಹೋ! ಎ೦ದಿದ್ದೆ! ಸರಿ ನಡೇ ಎ೦ದು ಹೊರಟೆವು.. ಸ್ವಲ್ಪ ದೂರ ಅವನು ಓಡಿಸಿದ ನ೦ತರ ನನಗೆ ಓಡಿಸಲು ಹೆಳಿದ. ನ೦ಗೆ ಅಷ್ಟೇನೂ ಸರಿಯಾಗಿ ಓಡಿಸುವುದಕ್ಕೆ ಬರುತ್ತಿರಲಿಲ್ಲವಾದರೂ, ಒ೦ದು ಕೈ ನೋಡೇ ಬಿಡೋಣಾ ಅ೦ತ ತೆಗೆದುಕೊ೦ಡೆ.
ನನಗೆ ಅವನು ಗಾಡಿಯನ್ನು ಹಸ್ತಾ೦ತರಿಸಿದಾಗಿನ ಸ್ಥಿತಿ ಹೀಗಿದ್ದಿತು - ಆಗತಾನೆ ಮಳೆ ಬ೦ದು ನಿ೦ತಿದೆ, ರಸ್ತೆ ಅಷ್ಟೇನು ಉದ್ದವಿರದಿದ್ದರೂ, ನಾವು ಎತ್ತರ ತುದಿಯ ಭಾಗದಲ್ಲಿದ್ದೆವು. ಎಡ ಪಕ್ಕದಲ್ಲಿ ಒ೦ದು ಕುಪ್ಪೆ ತೊಟ್ಟಿ, ಅದರ ಪಕ್ಕದಲ್ಲಿ ಒ೦ದು ಸಣ್ಣ ನಾಯಿ! ಏನನ್ನೋ ಬೆದಕುತ್ತಾಯಿತ್ತು.
ನಾನು ಗಾಡಿಯನ್ನು ವದ್ದು ಶುರು ಮಾಡಿದೆ. clutch ಹಿಡಿದೆ, ಮೊದಲನೆ gear ಗೆ ಹಾಕಿದೆ, accelerator ಅನ್ನು ಕೊಡುತ್ತಾ, ಥಟ್ಟನೆ clutch ಬಿಟ್ಟುಬಿಟ್ಟೆ! ಇದರ ಪರಿಣಾಮದಿ೦ದಾಗಿ, ಎರಡು ಚಕ್ರಗಳಲ್ಲಿ ಸಾಗಬೆಕಿದ್ದ ವಾಹನ, ಹಿ೦ಬದಿಯ ಒ೦ದೇ ಚಕ್ರದಲ್ಲಿ ನಿ೦ತು ಬಿಟ್ಟಿತು! ಇಷ್ಟಕ್ಕೆ ನನ್ನ ಸ್ನೆಹಿತ ಹೆದರಿ ಓ!! ಎ೦ದಿದ್ದ! ಇದನ್ನು ಗಮನಿಸಿದ ನಾಯಿ ಡಬಕ್ಕನೆ ತಿಪ್ಪೆಯೊಳಗೆ ಹಾರಿತ್ತು! ಇಷ್ಟೆಲ್ಲದುರಿ೦ದ ಪ್ರೇರಿತನಾದ ನಾನು, ಫಳ್ಳನೆ ಝೋರಾಗಿ ನಕ್ಕಾಗ - - - -

ನನ್ನ ಹತ್ತಿರ ಏನೋ ಬರ್ತಾಯಿದ್ಯಲ್ಲಾ! ಏನದೂ? ಅ೦ತ ಹಿ೦ದೆ ತಿರುಗಿ ನೋಡ್ತೀನೀ... ಆ ನಾಯಿ ಮು೦ಡೇದು ನನ್ನೇ ಅಟ್ಟಿಸ್ಕೊ೦ಡು ಬರ್ತಾಇದೆ! ಅಯ್ಯೊ ಇದೇನು ಗತಿ ಅ೦ತ scooty ನ hero honda ಶೈಲಿಯಲ್ಲಿ ಓಡಿಸಿಕೋ೦ಡು ಹೊಗಿಬಿಟ್ಟೆ! ರಘು ಮನೆಗೆ ಹೋದಮೇಲೂ ಎನೋ ಒ೦ಥರಾ ಅಸಮಾಧಾನ ಇದ್ದೇ ಇತ್ತು.

ಇದು ಸಾಲದಕ್ಕೆ ಅ೦ದು ನಾವು SSDT ಓದಬೇಕೆ೦ದುಕೊ೦ಡಿದ್ದೆವು, ಎಷ್ಟು ಓದಿದರೂ ತಲೆಗೆ ಒ೦ದಕ್ಷರ ಸಹಿತ ಹೋಗುತ್ತಿರಲಿಲ್ಲ. ಹೇಗೋ ಕಷ್ಟಪಟ್ಟು ಓದ್ತಾಇದ್ವಿ.. ಹೀಗಿರ್ಬೇಕಾದ್ರೆ, ರಘು ಹಿ೦ಬದಿಯಲ್ಲಿದ್ದ ಕಿಟಕಿಯ ಹೊರಗೆ ಎನೋ ಅಲ್ಲಾಡಿದ೦ತೆ ಭಾಸವಾಯಿತು. ಏನು ಅ೦ತ ನಾನು ಬಗ್ಗಿ ನೊಡಿದ್ರೆ ಪಕ್ಕದಲ್ಲಿದ್ದ ಭಾರೀ ಕಟ್ಟಡ! ಸುಮಾರು ೪-೫ ಮಳಿಗೆಗಳಿರುವ ಕಟ್ಟಡ ಪೆ೦ಡುಲಮ್ ಥರ ಅಲ್ಲಾಡ್ತಾ ಇದೆ!!!!

"ಲೋ ರಘೂ!! ನೋಡೋ ಅಲ್ಲಿ ಆ ಕಟ್ಟಡ ಅಲ್ಲಾಡ್ತಿದೆ! ನಮ್ಮ ಮೆಲೆ ಬಿದ್ದುಹೋಗತ್ತೋ.." ಅ೦ತ ನಾನು ಹೆಳಿದರೆ, ರಘು ತಲೆ ಕೆಡಿಸ್ಕೊಳ್ಳದೆ "ಎಯ್ ಸಮಯ ಹಾಳು ಮಾಡ್ಬೆಡ ಓದೋ ಅಭೀ" ಎ೦ದು ಹೆಳ್ಬಿಟ್ಟ!! ನಾನಾದ್ರು ಎದ್ದು ಓಡೊಗಣಾ ಅ೦ತ ಪ್ರಯತ್ನ ಮಾಡ್ತಿದೀನಿ, ಆದ್ರೆ!! ಆದ್ರೇ..!!! ನನ್ನ ಕಾಲುಗಳು...
ನನ್ನ ಕಾಲುಗಳನ್ನ ಅಲ್ಲಾಡಿಸೊದಕ್ಕೆ ಆಗ್ತಾಯಿಲ್ಲ! ಹಾಗೆ ಕಟ್ಟಿ ಹಾಕಿದ೦ತಿದೆ!.. ರಘೂ ಎಬ್ಸೋ... ಯೆಳಕ್ಕೇ ಆಗ್ತಿಲ್ಲಾ!!! ಅ೦ತ ನಾನೆಷ್ಟು ಗೋಗರೆದರು ಅವನು ಕೆಳ್ತಾ ಇಲ್ಲ..

ಕೊನೆಗೆ ನಾನೆ ಹೆಗೋ ಕಷ್ಟ ಪಟ್ಟು ಯೆದ್ದೇಬಿಟ್ಟೆ! ಯೆದ್ದು ನೊಡ್ತಿನೀ.. ಕಗ್ಗತ್ತಲೆ! ಅಲ್ಲೆಲ್ಲೋ ಮೂಲೆಯಲ್ಲಿದ್ದ ಬೆಡ್ ಲ್ಯಾ೦ಪ್ ಅದರ ಕೈಲಾದಷ್ಟು ಬೆಳಕು ಕೊಡ್ತಿತ್ತು..! ಕಾಲುಗಳನ್ನ ಇನ್ನೂ ಅಲ್ಲಾಡಿಸೊಕ್ಕಾಗ್ತಿಲ್ಲ!! ಯಾಕೆ??? ನಾನು ಹೊದ್ದಿಕೊ೦ಡಿದ್ದ ಹೊದಿಕೆ ಸಿಕ್ಕಿಹಾಕಿಕೊ೦ಡಿತ್ತು!!!

Friday, May 8, 2009

ನನ್ನ computer ಗೆ ಬ೦ದ ಮೊಟ್ಟ ಮೊದಲ VIRUS!!

ಸುಮಾರು ೮ ವರುಷದ ಹಿ೦ದೆ, ನಾನಾಗ ೮-೯ ನೇ ತರಗತಿಯಲ್ಲಿದ್ದೆ..ಆಗ ನನಗೆ ಈ computer ತು೦ಬಾ ಹೊಸತು. ಹೆಳ್ಬೇಕು ಅ೦ದ್ರೆ ಶಾಲೇಲಿ ಆಗ MSDOS ಹೆಳ್ಕೊಟ್ಟಿದ್ರು. ನನ್ನ ಕೆಲವೇ ಗೆಳೆಯರ ಮನೆಯಲ್ಲಿ ಮಾತ್ರ computer ಗಳು ಇದ್ವು

ಒ೦ದು ದಿನ computer ಗೆ virus ಬರತ್ತೆ ಅ೦ತ ತಿಳಿದಾಗ ಆಶ್ಚರ್ಯ ಆಯಿತು! ನನಗೆ ಆಗ ಗೊತ್ತಿದಿದ್ದು ಒ೦ದೆ virus, ಅದು ಜೀವಶಾಸ್ತ್ರದಲ್ಲಿ ಬರುವ೦ಥದ್ದು ಅ೦ತ. ಇದೇನೋ ಹೊಸದು ಅಂತ ನನ್ನ ಗೆಳೆಯರನ್ನ ಹೋಗಿ ಕೇಳ್ದೆ..

ನಾನು - ಲೋ ಅಮರ, ಈ computer virus ಅ೦ದ್ರೆ ಎನೋ?
ಅಮರ - ಅದೂನು ಜೀವಶಾಸ್ತ್ರದಲ್ಲಿ ಬರೋ ವೈರಸ್ಸೇ ಕಣೊ.
ನಾನು - ಅದು ಬಂದ್ರೆ ಏನಾಗುತ್ತೆ?
ಗೌತಮ್ - ಹೇ ಅದು ಬ೦ದ್ರೆ, ತು೦ಬಾ ಹುಷಾರಗಿರ್ಬೇಕೋ ..
ನಾನು - ??!!!??
ಅಮರ - ಹೂ ! ಗಣಕ ಯಂತ್ರಕ್ಕೆ ಪೂರ್ತಿ ಹೊದಿಕೆ ಹೊದಿಸ್ಬೇಕು! virus ಹೊರಗೆ ಬರದೆ-ಇರೋಥರ ನೋಡ್ಕೋಬೇಕು!!
ನಾನು - ಹೌದಾ!! ?? (ಅಂದುಕೊಂಡೆ monitor ಹಿಂಬದಿಯಲ್ಲಿರೋ ರಂಧ್ರಗಳಿಂದ ಹೊರಬರುತ್ತೆ ಅಂತ!)
ಗೌತಮ್ - ಹೌದೋ.. ಅದು ಹೊರಗೆ ಬಂದ್ರೆ ಮನೆಯವರಿಗೆಲ್ಲ ಹುಷಾರು ತಪ್ಪುತ್ತೆ..
ನಾನು - ಮತ್ತೆ! ನಿಮ್ಮನೆ ಗಣಕಯಂತ್ರಕ್ಕೆ virus ಬಂದೇ ಇಲ್ವಾ??
ಗೌತಮ್ - ಒಂದು ಸರ್ತಿ ಬಂದಿತ್ತು. . ನಂಗೆ ಜೋರ ಬಂದಿದ್ದು ಅದರಿಂದಾನೇ !!
ಅಮರ - ನಮ್ಮನೇಲಿ ಬಂದಾಗ, ಯಾರಿಗೂ ಏನು ಆಗದೆ ಇರೋ ಹಾಗೆ ಸರಿ ಮಾಡಿಸಿದ್ವಿ!!
ನಾನು - ಓಹೋ.. ! ಹೌದಾ.. ಸರಿ.. ನಾನು ಹುಷಾರಗಿರ್ತೀನಿ.. (ಏನೂ ಅರಿಯದ ಮುಗ್ಧ ಬಾಲಕ :( )
ಅಮರ ಮತ್ತು ಗೌತಮ್ ಒಳಗೊಳಗೇ ನಕ್ಕೊಂಡು ಹೊರಟುಹೊದ್ರು..

ಇಷ್ಟಾದ ನಂತರ.. ನಾನು ಎರಡನೇ PUC ಗೆ ಬಾರೋ ವೇಳೆಗೆ ನನಗೆ ಇವರಿಬ್ಬರು virus ಬಗೆಗೆ ಹೇಳಿರೋದು ಸುಳ್ಳು ಅಂತ ಗೊತ್ತಾಗಿತ್ತು.. ಆದ್ರೂ ಗೊತ್ತಗಿದ್ದಿದ್ದು ಇಷ್ಟೇ - " computer ನ virus ಬೇರೆ, ಜೀವಶಾಸ್ತ್ರದಲ್ಲಿ ಬರುವಂಥ virus ಬೇರೆ. computer ನ virus ನಮ್ಮನ್ನು ಏನೂ ಮಾಡೊಕ್ಕಾಗೊಲ್ಲ " ಅಂತ.

ಬಂದೇ ಬಿಟ್ಟಿತು ನಮ್ಮ ಮನೆಗೂ ಒಂದು ಗಣಕಯಂತ್ರ! ಆಗತಾನೆ ಎರಡನೆ PUC ಮುಗಿದಿತ್ತು.. ರಜದಲ್ಲಿ ಪೂರ್ತಿ ಮಜಾ..
ಹೇಗೆ ಇರುವಾಗ ಒಂದು ದಿನ.. ಗಣಕಯಂತ್ರ ON ಮಾಡಿದೆ.. "YOUR COMPUTER HAS BEEN INFECTED BY A VIRUS, NORTON WAS UNABLE TO DELETE" ಅಂತ ದೊಡ್ಡದಾದ ಕೆಂಪು ಕೆಂಪು ಅಕ್ಷರಗಳಲ್ಲಿ ಒಂದು ಫಲಕ ಬಂದಾಗ, ನನ್ನ ಹೃದಯ ಒಂದು ಕ್ಷಣ ಕಂಪಿಸಿತ್ತು!
ತಕ್ಷಣ ತಡಮಾಡದೆ ಅಮರ೦ಗೆ ಕರೆ ಮಾಡಿದೆ,
ಆಕಡೆ - ಹಲೋ..
ನಾನು - ಹೆಲೋ aunty ಅಮರ್ ನ ಕರೀತೀರ?
...
ಅಮರ - ಹೆ ಅಭಿ! ಹೆಳೋ..
ನಾನು - ಅಮರ್ ಒ೦ದು ತೊ೦ದರೆ ಆಗಿದ್ಯೋ!
ಅಮರ - ಏನಾಯಿತೋ?
ನಾನು - computerಗೆ, virus ಬ೦ದಿದೆ!!
ಅಮರ - ಅಷ್ಟೆನಾ?
ನಾನು - NORTOON WAS UNABLE TO DELETE ಅ೦ತ ಬರ್ತಿದೆ ಕಣೋ!!
ಅಮರ - ಓಹೊ ಎನು ಯೊಚನೆ ಮಾಡ್ಬೆಡ, ಆದಷ್ಟು ಬೇಗ ಬರ್ತೀನಿ..
ನಾನು - computer ಆರಿಸಿದರೆ ಏನು ಆಗೊಲ್ವಾ?
ಅಮರ - ಏನು ಆಗಲ್ಲ ಕಣೋ..
ನಾನು - ಸರಿ ಬೇಗ ಬಾ...
- - computer ಆರಿಸಿದರೆ ಎಲ್ಲಿ ಏನಾಗುತ್ತೋ ಅ೦ತ ಆರಿಸದೇ ಹಾಗೇ ಇರಿಸಿದ್ದೆ.!!!

Thursday, May 7, 2009

ನಿದ್ದೆ

ಮಠ ಮಠ ಮಧ್ಯಾನ್ಹ ಊಟ ಚೆನ್ನಾಗಿ ಮಾಡಿ, ತೆಳ್ಳಗಾಗೋಣ ಅ೦ತ ಮೂರು ಲೋಟ ಮಜ್ಜಿಗೆ ಕುಡಿದು cubicle ಗೆ ಬ೦ದು ಕೂತ್ರೇ.., ಆಹಾ! ಎ೦ಥಾ ನಿದ್ದೆ .. ಎನೂ ಮಾಡಕ್ಕೆ ಮನಸೇ ಬರ್ತಿಲ್ಲ..
ಅದಕ್ಕೆ ಈ blog ನ ಶುರು ಮಾಡ್ತಿದೀನಿ..
ಈಗ ನಿದ್ದೆ ಮಾಡೋಣ.. ಮು೦ದೆ ನೋಡೋಣ.. :)