Friday, June 11, 2010

ಒಲಿದು ಬಾ

ಕಣ್ಣ ತೆರೆಸಿದ ಕನ್ನೆ, ಬೇಡುವೆನು ನಿನ್ನಲ್ಲಿ..
ನನ್ನ ಹೃದಯವ ಉಳಿಸು ಮನವ ನೀಡಿ..

ಶೃಂಗಾರದಾ ಮೊಗವ, ಬಂಗಾರದಾ ಮನವ
ಕಾಣುವಾಸೆಯೇ ನಿನ್ನ ಮೌನದುಡುಗೆಯಲ್ಲಿ..

ಸಣ್ಣ ಹಟವಿದು ನನದು, ನೋಡುವಾಸೆಗೆ ಮಣಿದು
ಒಲಿದು ಬಾರೆಯ ಗೆಳತಿ ನನ್ನ ಬಳಿಗೆ.. ?

-- ಅಭಿ