Wednesday, December 23, 2009

ಏನಿದು! ?

ನಾ ಬರೆದ ಸಾಲುಗಳೇ ಅಣಕಿಸುತಿವೆ ನನ್ನನ್ನು
ನಿನ್ನ ಆಣತಿಯಿರದೆ ಅಳಿಸಿ ಬಿಡಲೆ..
ನಾ ಕ೦ಡ ಕನಸುಗಳೇ ಹೋಗುತಿರಲು ದೂರ
ನಿನ್ನ ಮೌನವ ಮೀರಿ ಕಳಿಸಿಕೊಡಲೆ...

ಮಾತಿನಾಚೆಯ ಮೌನ ಕರೆಯುತಿದೆ ಕೈಬೀಸಿ
ಹರಟಬೀಕಿದೆ ಮೂಕವಾಕ್ಯದಲ್ಲಿ..
ಹಾರಿಹೋಗುವ ಕನಸ ಅ೦ಕೆ ಮೀರಿದ ಮನಸು
ಹಿಡಿಯಬೇಕಿದೆ ವಿಮಾನವದೆಲ್ಲಿ.. ?

ಅಳಿಸುವಾತುರದಲ್ಲಿ ಆಣತಿಯ ಬೇಡದುದಕೆ
ಹಠವಮಾಡುತಿವೆ ಬೆರಳು ಬೇಡವೆ೦ದು
ಅಣಕಿಸಿದ ಸಾಲುಗಳ ನಾಚಿ ನೀರಾಗಿಸಲು
ಬರೆಯತೊಡಗಿವೆ ಬೇರದೇನಿದನ್ನು.. ?

-- ಅಭಿ