Sunday, June 23, 2013

ಹುಸಿ ಮುನಿಸು

ಸಿಟ್ಟೇಕೆ ನನ್ನ ಗೆಳತಿ
ತಡೆಯಲಾರೆನು ನಾನು
ಹುಸಿ ಮುನಿಸು ಸಾಕಿಂದು
ನಿನಗೆ ನಾ ಶರಣು !

ನಿನ್ನ ಕಾಣದೆ ನಾನು
ಬೆಂದು ಬಡವಾಗಿರುವೆ
ಸಹಿಸಲಾರೆನು ನಿನ್ನ
ಮೌನದ ಶಿಕ್ಷೆಯ

ಇಂದಾಗಬೇಕಿದ್ದ ನಮ್ಮ
ಸುಖ ಸಮ್ಮಿಲನವನು
ವಿಧಿಯ ಈ ಆಟದೀ,
ಮುನ್ದೂಡಬೆಕಿದ್ದು ಅನಿರೀಕ್ಷಿತ

ಬಂದುಬಿಡುವೆನು ಬೇಗ
ಬಹುದೂರ ನಾನಿಲ್ಲ
ನಿನ್ನ ಹೃದಯದೇ ಇರುವೆ
ಮುನಿಸಿಗಲ್ಲೀಗ ಜಾಗವಿಲ್ಲ !

--
ಅಭಿ 

ಸ್ಫೂರ್ತಿ

ಬರೆಯಬೇಕೆನಿಸಿದೆ ನನಗೊಂದು ಕವಿತೆ
ಆದರೇನು ಮಾಡಲಿ ಪದಗಳದೇ ಕೊರತೆ !

ಅವಳ ಆ ನಗುವ ನಯನ ಛೇಡಿಸಿರಲು ಮನವನೇ
ಹೊಮ್ಮುತಿಹುದು ನವೀನ ಭಾವ ಇಂದು ಈ ಕ್ಷಣದಲೇ !

ಇಷ್ಟು ಕಾಲ ಎಲ್ಲಿ ಅವಿತಿದ್ದೆ ನೀ ನನ್ನೆದುರಿಗೆ ಬಾರದೆ ?
ದಣಿದ ಕವಿಯ ಸತಾಯಿಸಿ ಸ್ಫೂರ್ತಿಯಾಗದೆ !

ಕವಿತೆ ಮೂಡಿಬರಲು ಪದವು ಬೇಕು ಏತಕೆ?
ಮನದಲಿರುವ ಭಾವ ಚಿಮ್ಮಿ ಕವಿತೆಯಾಗಿದೆ  !

--ಅಭಿ