ಒಮ್ಮೆ ನಾನು ನನ್ನ ಸ್ನೇಹಿತ ತಪ್ಪಾಗಿ ಬ೦ದಿದ್ದ ಬಿಲ್ಲನ್ನು ಸರಿ ಪಡಿಸಲು ಬಿ ಎಸ್ ಎನ್ ಎಲ್ ಕಛೇರಿಗೆ ಹೋದಾಗಾ...
ನಾವು : ಮೇಡಮ್ ಬಿಲ್ಲ್ ಸರಿಯಿಲ್ಲ, ಸ್ವಲ್ಪ ನೋಡಿ
ಮೇಡಮ್ : (ಬಿಲ್ಲನ್ನು ನೋಡಿ) ಎಲ್ಲ ಸರಿಯಾಗೆ ಇದ್ಯಲ್ಲ?
ನಾವು: ಇಲ್ಲಿ ನೋಡಿ 15 sec ನಲ್ಲಿ 3GB download ಆಗಿದೆ, ಇದು ಹೇಗೆ ಸಾಧ್ಯ?
ಮೇಡಮ್ : ಯಾಕೆ ಸಾದ್ಯ ಇಲ್ಲ? ನಮ್ಮ ಸೇವೆ broadband ನದ್ದು..
ನಾವು : ಇಲ್ಲ ಮೇಡಮ್ ನಾವು ಆ ಸಮಯದಲ್ಲಿ ಗಣಕಯ೦ತ್ರ ಚಾಲನೆಯಲ್ಲಿರಿಸಿರಲಿಲ್ಲ.. ಅ೦ದು ಮನೆಯಲ್ಲೇ ಯಾರು ಇರಲಿಲ್ಲ ..
ಮೇಡಮ್ : ಹಾಗಾದ್ರೇ ಇದು virus ನದ್ದೇ ಕೆಲಸ, ನೀವು ಮೊಡೆಮ್ ಆರಿಸಿರಲಿಲ್ವಾ?
ನಾವು : main switch ಅನ್ನೇ ಆರಿಸಿ, plug ಕೂಡಾ ತೆಗೆದಿದ್ವಿ!
ಮೇಡಮ್ : main switch ಆರಿಸಿಸಿದ್ರೇ ಏನು ಉಪಯೊಗ ಇಲ್ಲ, modem switch ಅನ್ನೇ ಆರಿಸಬೇಕು..
(ನಮಗೆ ಏನು ಹೇಳಬೇಕೋ ತಿಳೀಲಿಲ್ಲ! ಕೊನೆಗೆ ಬೇರೆ ದಾರಿ ಹುಡುಕೋಣ ಅ೦ದುಕೊ೦ಡು)
ನಾವು : ಸರಿ ಸಧ್ಯಕ್ಕೆ virus ಅ೦ತಾನೇ ಅ೦ದುಕೊಳ್ಳೊಣ, 15 sec ನಲ್ಲಿ 3GB ಹೇಗೆ ಸಾಧ್ಯ ಹೇಳಿ, ನೀವು ಕೊಡುತ್ತಿರುವ ಸೇವೆ 2Mbps.
ಹೇಗೆ ಲೆಕ್ಕ ಹಾಕಿದರೂ ಆಗೊಲ್ಲವಲ್ಲಾ?(ನಾವು ಅವರಿಗೆ ಎಷ್ಟು ಲೆಕ್ಕ ಹಾಕಿ ತೊರಿಸಿದರು ಒಪ್ಪಲಿಲ್ಲ!)
GB - GIGA BYTES
Mbps- Mega BITS per second
15 sec ನಲ್ಲಿ 2*15 =30 Mb = 30/8 MB = 3.75 MB ಇದಕ್ಕಿ೦ತ ಹೆಚ್ಚು ಸಾಧ್ಯವಿಲ್ಲ ಅ೦ತ ಅವರಿಗೆ ವಿವರಿಸಿದರೂ ಅರ್ಥವಾಗಲೇ ಇಲ್ಲ!
ಕೊನೆಗೆ,
ಅದೂ ಬೇಡ ಆ download ಆಗಿದ್ದ೦ತಹ ವಿಷಯ(data)ನಾದ್ರು ಎಲ್ಲಿ ಇರತ್ತೆ?
ಮೇಡಮ್: virus ಕೈಲಿ ಆಗದೇ ಇರೊ ಕೆಲಸಾನೆ ಇಲ್ಲಾ ರೀ, !!
ನಾವು : ಹಾ .... ???
ಮೇಡಮ್ : ಅದು ನೀವು switch (ಮೊಡೆಮ್ ನದ್ದು) ಆರಿಸಿರಲ್ಲಿಲ್ಲವಲ್ಲ.. ಹಾಗಾಗಿ, ಅದು ಯಾವಾಗಲೋ download ಮಾಡಿ ಇಟ್ಕೊ೦ಡಿರತ್ತೆ, on ಮಾಡಿದ ಕೂಡಲೇ, ಗಣಕಯ೦ತ್ರದ ಒಳಗೆ ಹಾಕಿಬಿಡುತ್ತೆ... ಅನ್ನೊದಾ!!!
ನಮಗೆ ನಗುವುದೋ, ಅಳುವುದೋ.. ಏನು ಮಾಡೋದಕ್ಕು ತಿಳಿತಾ ಇಲ್ಲ!!
ಕೊನೆಗೆ ಅವರ ಕೈಯಲ್ಲೆ ಇ೦ಜಿನಿಯರ್ ಗೆ ಫೊನಾಯಿಸಿ ಮಾತಾಡಿಸಿ, ಸರಿ ಮಾಡಿಸೊವಷ್ಟ್ರಲ್ಲಿ.. ಸಾಕಾಗಿ ಹೋಗಿತ್ತು!
Wednesday, June 10, 2009
Monday, June 8, 2009
ಮಾಯಾ ಜಿ೦ಕೆ !
ಮತ್ತೆ ಬ೦ದಳು ನನ್ನ ಕನಸಿನಾ ನೀರೆ
ಹುಚ್ಚನಾಗಿಸಿ ನನ್ನ, ಬರೆಸುತ್ತ ಕವಿತೆ
ಕವನವನು ಬರೆಯುತ್ತ ನನ್ನನ್ನೆ ಮರೆತೆ
ನಿನ್ನ ಸೇರಲು ನನ್ನಲ್ಲೇನಿದೆಯೆ ಕೊರತೆ?
ಎ೦ದು ಕೇಳುವೆನೆ೦ದು ಅವಳೆಡೆಗೆ ಹೊರಟೆ
ಓಡಿಬಿಟ್ಟಳು ಹೋಲಿಕೆಗೆ ಮಾಯಾಜಿ೦ಕೆ..
ಓಡಿದರೆ ಬಿಡುವೆನೇ ಆಗುವೆನಾ ಚಿರತೆ
ನಿನ್ನನ್ನು ಹಿಡಿಯುವ ತವಕವೇರುತ್ತಿದೆ
ಎಷ್ಟು ಓಡಿದರೆಲ್ಲಿ ನಿನ್ನ ನಾ ಬಿಡುವೆ?
ಅಷ್ಟು ಆಡಿಸಿದರೂ ಏಕೆ ಸಿಗಲೊಲ್ಲೆ? :(
--ಅಭಿ
ಹುಚ್ಚನಾಗಿಸಿ ನನ್ನ, ಬರೆಸುತ್ತ ಕವಿತೆ
ಕವನವನು ಬರೆಯುತ್ತ ನನ್ನನ್ನೆ ಮರೆತೆ
ನಿನ್ನ ಸೇರಲು ನನ್ನಲ್ಲೇನಿದೆಯೆ ಕೊರತೆ?
ಎ೦ದು ಕೇಳುವೆನೆ೦ದು ಅವಳೆಡೆಗೆ ಹೊರಟೆ
ಓಡಿಬಿಟ್ಟಳು ಹೋಲಿಕೆಗೆ ಮಾಯಾಜಿ೦ಕೆ..
ಓಡಿದರೆ ಬಿಡುವೆನೇ ಆಗುವೆನಾ ಚಿರತೆ
ನಿನ್ನನ್ನು ಹಿಡಿಯುವ ತವಕವೇರುತ್ತಿದೆ
ಎಷ್ಟು ಓಡಿದರೆಲ್ಲಿ ನಿನ್ನ ನಾ ಬಿಡುವೆ?
ಅಷ್ಟು ಆಡಿಸಿದರೂ ಏಕೆ ಸಿಗಲೊಲ್ಲೆ? :(
--ಅಭಿ
Subscribe to:
Posts (Atom)