Thursday, May 14, 2009

ಯಾವುದಾ ಹೆಸರು ?

ಯಾರಾಕೆ ಯಾರಾಕೆ ಕಾಡುತಿರೆ ನೀವೆಲ್ಲ |
ತಿಳಿಸುವೆನು ನಾ ಇ೦ದು ಅವಳ ಆ ಹೆಸರ ||

ಏಕೆ ಬ೦ದಿಹುದೊ ನಾಕಾಣೆ ನಿಮಗಿಷ್ಟು ಕಾತುರ !
ಏನು ಮಾಡುವಿರಿ ತಿಳಿದು ಅವಳ ಆ ಹೆಸರ ?

ಗೊತ್ತಿಲ್ಲ ಅವಳಿಗಿನ್ನು ನಾಬರೆದ ಕವನ !
ಹೇಗೆ ಹೇಳಲಿ ನಿಮಗೆ ಅವಳ ಆ ಹೆಸರ ?

ಪಾಪರಹಿತಳು , ಹೆಸರ ಕೆಡಿಸದಿರಿ ಹೊಲಸಿ೦ದ |
ಬಚ್ಚಿಡಲಿ ಹೇಗೆ ನಾ ಅವಳ ಆ ಹೆಸರ ?

ಎಲೆ ಹಣ್ಣು ಹೂ ಕಾಯಿ ಚಿಗುರಿರಲು ಧರೆಯಲ್ಲಿ !
ಎಲ್ಲಿ ಅಡಗಿಸಲಿ ಹೆಸರ ಈ ಕವನದಲ್ಲಿ ?

ಓ ಗೆಳತಿ ಓದಿದೆಯ ಈ ಕವನವನ್ನು ?
ತಿಳಿಯಲೇನಿದೆ ನಿನಗೆ, ನಿನ್ನದೇ ಹೆಸರು || :)

--ಅಭಿ

18 comments:

  1. But super poem... Top class..

    ReplyDelete
  2. ha ha ha..
    keep guessing!! :P

    ReplyDelete
  3. I think the name is in this line - "ಎಲೆ ಹಣ್ಣು ಹೂ ಕಾಯಿ ಚಿಗುರಿರಲು ಧರೆಯಲ್ಲಿ !"

    ReplyDelete
  4. dharae.. I got it

    Super agidhe

    ReplyDelete
  5. aahan!
    nice try ashwin! :)
    @ thejas - i think u can guess moreee...

    ReplyDelete
  6. hmmm...
    continue continue...

    ReplyDelete
  7. helayya helayya ninnvala a hesara
    kayisuve yakayya helalu a hesara

    ReplyDelete
  8. ಸೂಪರ್ ಕಣೊ... Great going..

    ReplyDelete
  9. ಯಾರಾಕೆ ಯಾರಾಕೆ
    ನಗೆಯಿಂದ ನಿಮ್ಮ ಮನಸನ್ನು ಗೆದ್ದವಳು...
    ತನ್ನ ಬರಹದಿಂದ ನಿಮ್ಮೊಳಗಿನ ಕವಿಯನ್ನು ಬಡಿದೆಬ್ಬಿಸಿದವಳು...
    ಇಷ್ಟೊಂದು ಕಾಯಬೇಕೆ ನಾವು ತಿಳಿಯಲು ಆ ಪೋರಿ ಯಾರೆಂದು?
    ಮಾತಲ್ಲಿ ಮರೆಸಿದ್ದು ಸಾಕು ಹೇಳಿಬಿಡಿ ಆ ಹೆಸರು ಯಾರದೆಂದು

    ReplyDelete
  10. ಆಹಾ! ನೆನ್ನೆ ಎಲ್ರು ನಿನ್ನ ಕಾಡ್ತಿದ್ರು.. ಅದಕ್ಕೆ ಈಗ್ ನೀನ್ ಎಲ್ರನ್ನು ಆಟ ಆಡಿಸ್ತಿದ್ದೀಯ? ಮಜ ಮಾಡು.. ಒ೦ದು ದೊಡ್ಡ ಹುಡ್ಗೀರ್ ಹೆಸರುಗಳ list ಬರೊ ಹಾಗ್ ಕಾಣ್ತಿದೆ! :D :D :D :D

    ReplyDelete
  11. hmmm..?!!
    yaaraake yaaraake endu kelidenandu
    tilidide nanageega aake yaarendu... ;p

    ReplyDelete