Wednesday, January 27, 2010

ತೊರೆದು ಹೋಗದಿರು..


ನೀ ನನ್ನ ಇನಿಯನಲ್ಲದಿದ್ದರೇನೀಗ..
ತೊರೆದು ಹೋಗಬೇಡ ಗೆಳೆತನವ..
ನೀ ಸನಿಹವಿಲ್ಲದಿದ್ದರೇನೀಗ ,
ಮರೆತು ಹೋಗಬೇಡ ಸಮ್ಮಿಲನವ..

ಹಸಿರಾಯಿತು ತನುವೆಲ್ಲವು,
ನಿನ್ನೊಲುಮೆಯ ಮಾತುಗಳಲೇ..
ಬರಿದಾಗಿಸಿ ಹೋಗದಿರು. .
ಈ ಹೃದಯವ, ಮೌನದಿಂದೇ. .

ಜಗವನೆದುರಿಸುವೆನೆಂದೆ ನೀನಂದು
ನಾನಿದ್ದರೆ ನಿನ್ನ ಬೆನ್ನ ಹಿಂದೆ..
ಏಕಿಂದು ಹೆದರಿರುವೆ ನಾ ಬರಲು
ನಿನ್ನ ಹಿಂದೆ ಹಿಂದೆ..
-ಅಭಿ

Wednesday, December 23, 2009

ಏನಿದು! ?

ನಾ ಬರೆದ ಸಾಲುಗಳೇ ಅಣಕಿಸುತಿವೆ ನನ್ನನ್ನು
ನಿನ್ನ ಆಣತಿಯಿರದೆ ಅಳಿಸಿ ಬಿಡಲೆ..
ನಾ ಕ೦ಡ ಕನಸುಗಳೇ ಹೋಗುತಿರಲು ದೂರ
ನಿನ್ನ ಮೌನವ ಮೀರಿ ಕಳಿಸಿಕೊಡಲೆ...

ಮಾತಿನಾಚೆಯ ಮೌನ ಕರೆಯುತಿದೆ ಕೈಬೀಸಿ
ಹರಟಬೀಕಿದೆ ಮೂಕವಾಕ್ಯದಲ್ಲಿ..
ಹಾರಿಹೋಗುವ ಕನಸ ಅ೦ಕೆ ಮೀರಿದ ಮನಸು
ಹಿಡಿಯಬೇಕಿದೆ ವಿಮಾನವದೆಲ್ಲಿ.. ?

ಅಳಿಸುವಾತುರದಲ್ಲಿ ಆಣತಿಯ ಬೇಡದುದಕೆ
ಹಠವಮಾಡುತಿವೆ ಬೆರಳು ಬೇಡವೆ೦ದು
ಅಣಕಿಸಿದ ಸಾಲುಗಳ ನಾಚಿ ನೀರಾಗಿಸಲು
ಬರೆಯತೊಡಗಿವೆ ಬೇರದೇನಿದನ್ನು.. ?

-- ಅಭಿ

Wednesday, August 26, 2009

ಅನಿಶ್ಚಿತ !

ಪದಗಳಿರದ ಕವನದಲ್ಲಿ
ಹೃದಯ ತು೦ಬಿದ ಭಾವವೆ
ತರ್ಕವಿರದ ವಿಷಯದಲ್ಲಿ
ಮರ್ಮ ತು೦ಬಿದ ಜೀವವೆ..

ಬಿಡಿಬಿಡಿಸಿದಲ್ಲೂ ಸುತ್ತುತ್ತಿರುವ
ಆಯಮಗಳ ಸರಣಿಯೆ.
ಸ್ಪಷ್ಟವಾದ ಮಾತಿನಲ್ಲಿ
ನಿಗೂಢತೆಯ ಚಿತ್ತವೆ..

ಅಣು ರೇಣುವಿನಲ್ಲೂ
ವಿಶ್ವ ಚೈತನ್ಯದ ಶಕ್ತಿಯೆ
ಜಗವನಾಳುವ ಯುಕ್ತಿಯೆ
ಮೊಗವ ತೋರದ ಮುಕ್ತಿಯೆ..!


--ಅಭಿ