Saturday, May 23, 2009

ಕನಸಿನ ನೀರೆ

ಓ ಕನಸೇ ನಿನಗಾರು ಸಾಟಿ ?
ಏಕೆ ಬ೦ದೆ ನನ್ನೆದೆಯ ಮೀಟಿ ||

ಏಕೆ ತೋರಿಸಿದೆ ಅವಳನ್ನು ?
ನಾನೆಲ್ಲೂ ಕಾಣದವಳನ್ನು |
ಹೇಗೆ ಮರೆಯಲಿ ಕಣ್ಣನ್ನು ?
ಹೊಳೆವ ಮಿ೦ಚಿನ ಅ೦ಚನ್ನು ||

ಯಾವುದಾ ಮೈಮಾಟ ?
ಬಳುಕುವ ಬಳ್ಳಿಗೇ ಪಾಠ !
ಆಡಬೇಡವೇ ಜೂಟಾಟ..
ಕೊನೆವರೆಗುಳಿಸುತ್ತ ಹುಡುಕಾಟ ||

ಓ ನೀರೆ, ನೀನಾರೆ.. ?
ಏಕೆ ಇರುವೆ ಕನಸಲ್ಲೆ..|
ಬರಬಾರದೇ ಬಳಿಗಿಲ್ಲೇ..
ಅರಸುತ್ತಲಿರುವೆ ನಿನ್ನನ್ನೇ..|| :)

--ಅಭಿ

10 comments:

  1. Yaarappa avlu? Padhya super aagidhe..

    ReplyDelete
  2. ಗಗನಕುಸುಮ ಅಲ್ಲ ಬಿಡು.. ಸಿಕ್ತಾಳೆ .. ಪರದಾಟ ಬೇಡ :D

    ReplyDelete
  3. ಕನಸಿನ ಬಾಲೆ.. ಯಾರೋ ನಾನರಿಯೆ..
    ಹುಡುಕಾಟದಲ್ಲಿರುವೆ ಕಾಣಿಸಿದರೆ ತೊರಿಸುವೆಯೆ? :)

    ಮೆಚ್ಚುಗೆಗೆ ಧನ್ಯವಾದ :)

    ReplyDelete
  4. ಏಕೆ ತೋರಿಸಿದೆ ಅವಳನ್ನು ?
    ನಾನೆಲ್ಲೂ ಕಾಣದವಳನ್ನು |
    ಹೇಗೆ ಮರೆಯಲಿ ಕಣ್ಣನ್ನು ?
    ಹೊಳೆವ ಮಿ೦ಚಿನ ಅ೦ಚನ್ನು ||

    awesome!!!!

    ReplyDelete
  5. ನೀನು ಈ ಕವನ ಯಾಕೆ ಬರೆದೆ ಅಂತ ಇನ್ನು ಯಾರಿಗೂ ಅರ್ಥ ಆಗಿಲ್ಲ ! :D

    ReplyDelete
  6. ಇದರಲ್ಲಿ ಅರ್ಥ ಆಗೊದೇನಿದೆ?
    ಇದೊ೦ದು ಕಲ್ಪನೆ ಅಷ್ಟೆ..

    ReplyDelete
  7. ಕನಸು ಯಾವತ್ತೂ ಸುಂದರ, ಅಲ್ಲವೇ ಅಭಿ? ಚಂದದ ಕವನಕ್ಕೆ ಅಭಿನಂದನೆಗಳು.ನಿಮ್ಮ ಬೆಳದಿಂಗಳ ಬಾಲೆ ಬೇಗನೆ ಎದುರಿಗೆ ಸಿಗುವಂತಾಗಲಿ ಎಂದು ಹಾರೈಕೆ :-)

    ReplyDelete
  8. ಕನಸಲ್ಲಿ ಕೆಟ್ಟ ಕನಸು ಅ೦ತಾನು ಇದೆ..
    ಆದ್ರೆ ಸ್ವಲ್ಪ ಯೊಚನೆ ಮಾಡಿ ನೊಡಿದ್ರೆ ನೇವು ಹೆಳೊದು ಸರಿ,
    ಕೆಟ್ಟ ಕನಸಾದ್ರೆ, ಅದು ಕನಸು ಅಷ್ಟೇ ಅನ್ನೋ ಕಾರಣಕ್ಕೆ ಅದು ಸು೦ದರ! :)

    ReplyDelete
  9. ಭರವಸೆಯಿರಲಿ...
    ಕನಸಲ್ಲಿ ಕಾಡುವವಳು ನನಸಲ್ಲಿ ಬಂದು ಬಿಡ್ತಾಳೆ..ಡೋಂಟು ವರ್ರಿಇಇಇ...! ಅಲ್ಲಿಯವರೆಗೆ ಸುಂದರ ಕವನಗಳನ್ನು ನೀರೆಗಾಗಿ ಬರೀತಾ ಇರಿ.
    -ಧರಿತ್ರಿ

    ReplyDelete
  10. kelavu kansu kansage chanda... athva adu kansu anno kaaranakke ashtu aptavagatte..
    ene irli, nim kansina hudgi adashtu bega nimge sigli:)

    ReplyDelete