Wednesday, May 20, 2009

ಜೀವನ "?"

ಜೀವನವೆ೦ಬುದು ಗೆಳೆಯ, ಪ್ರಶ್ನೆಗಳ ಸ೦ತೆ |
ಉತ್ತರಿಸು ನೀನದನು ಒ೦ದೊ೦ದರ೦ತೆ ||

ಒ೦ದೆ ಪ್ರಶ್ನೆಗೆ ಇಹುದು ನೂರಾರು ಉತ್ತರ |
ಆರಿಸು ನೀನದರಲ್ಲಿ ಯಾವುದದು ಹತ್ತಿರ ||

ಹತ್ತಿರದ ಉತ್ತರವ ನೀನೀಗ ಜೋಡಿಸಲು |
ಉದ್ಭವಿಸುತಿಹುದಲ್ಲಿ ಇನ್ನೂರು ಪ್ರಶ್ನೆಗಳು ||

ಎ೦ಥವಿವು ಗೊ೦ದಲಗಳೆ೦ದು ಕೊರಗಲು ಬೇಡ |
ಸೂಕ್ಷ್ಮತೆಯಿ೦ ನೀನೋಡು, ಪ್ರಶ್ನೆಗಿದೆ ಉತ್ತರ ||

ಪ್ರಶ್ನೆಗಳಿಗುತ್ತರವ, ಉತ್ತರಕೆ ಪ್ರಶ್ನೆಗಳ |
ಕೆದಕುತ್ತ ಬೆದಕುತ್ತ ಸಾಗಲೀ ಜೀವನ || :)

--ಅಭಿ

8 comments:

  1. I can identify with this poem.. Very relevant.. Good one.. You are becoming a wonderful poet day by day. :)

    ReplyDelete
  2. :-)
    thank you thejas.

    ReplyDelete
  3. ಚೆನ್ನಾಗಿದೆ ಕಣ್ಲ :)

    ReplyDelete
  4. Thumba chennagidhe.. dhine dhine olle kavi agthidhya.

    ReplyDelete
  5. @ashwin -copy cat!! any ways.. dhanyavada :)

    ReplyDelete
  6. Nice poem. I liked the addition of question mark in the title of the poem.

    ReplyDelete
  7. First time, visiting your blog. Very good writeups. Liked all :-)) @ Some places, lines are really touching. Keep bloging. Let more and more posts come up in "Kaarana". Good Luck.

    P.S - Wanted to comment in kannada. But it is not possible to copy and paste here from any other location. Please make it possible.

    ReplyDelete
  8. ದಿವ್ಯ ರವರೇ, ಬ್ಲೊಗ್ ಮೆಚ್ಚಿದ್ದಕ್ಕೆ ಧನ್ಯವಾದ..
    ನಿಮ್ಮ ಪ್ರೋತ್ಸಾಹ ನನಗೆ ಬೇಕು..
    ಕನ್ನಡದಲ್ಲಿ ಕಮೆ೦ಟ್ ಮಾಡಕ್ಕಾಗದೇಯಿರೋಹಾಗೆ ನಾನೇನು ಮಾಡಿಲ್ವಲ್ಲ!

    ReplyDelete